ದಿನಾಂಕ ೨೮.೦೭.೨೦೧೫ ರಂದು ಭಾರತ ದೇಶದ ೧೧ನೇ ರಾಷ್ಟ್ರಪತಿಯಾದ ಅಬ್ದುಲ್ ಕಲಾಂರವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯಲ್ಲಿ ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿಲ್ಲಿ ಡಿಸೋಜರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಗಳನ್ನು ಸಲ್ಲಿಸಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿಲ್ಲಿ ಡಿಸೋಜ , ಡೋರತಿ ಮೇರಿ ಡಿಸೋಜ, ಬಾಲಕೃಷ್ಣ ಪೊರ್ದಾಳ್ , ವಿಲ್ಮಾ ಫೆರ್ನಾಂಡೀಸ್ , ಕುಮಾರಿ ಜೋಸ್ಲಿನ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
- ಸಿಸ್ಟರ್ ಲಿಲ್ಲಿ ಡಿಸೋಜ
ಮುಖ್ಯೋಪಾಧ್ಯಾಯಿನಿ
Comments powered by CComment