೨೦೧೫-೧೬ನೇ ಸಾಲಿನ ಶೈಕ್ಷಣಿಕ ವರ್ಷದ ಪುತ್ತೂರು ನಗರದ ವಲಯ ಮಟ್ಟದ ಕಬಡ್ಡಿ  ಪಂದ್ಯಾಟವು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೧.೦೮.೨೦೧೫ ರಂದು ಶಾಲಾ ಮ್ಯಾನೇಜರ್ ಸಿಸ್ಟರ್ ಲೋಯ್‌ಲಿನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟಕರಾಗಿ ಪುರಸಭೆಯ ಸದಸ್ಯರಾದ ಶ್ರೀಯುತ ಮಹಮ್ಮದ್ ಆಲಿ ಹಾಗೂ ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ಶ್ರೀಯುತ ಸುಂದರ ಗೌಡ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ವಿಜಯ ಸರಸ್ವತಿ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಕ.ರಾ.ಪ್ರಾ.ಶಾ ಶಿಕ್ಷಕ ಸಂಘದ ಕೋಶಾಧಿಕಾರಿ ಸ್ಟ್ಯಾನಿ ಪ್ರವೀಣ್, ಬೆಥನಿ ಪ್ರೌಢಶಾಲೆ, ಪ್ರಾಥಮಿಕ ಹಾಗೂ ಪ್ಲೇ ಸ್ಕೂಲಿನ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

  ಬಾಲಕರ ವಿಭಾಗದಲ್ಲಿ ೧೧ ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ ೯ ತಂಡಗಳು ಭಾಗವಹಿಸಿದವು. ಬಾಲಕರ ವಿಭಾಗದಲ್ಲಿ ಪ್ರಥಮ ಸ.ಉ.ಹಿ.ಪ್ರಾ ಶಾಲೆ ಕಬಕ. ಹಾಗೂ ದ್ವಿತೀಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಪ್ರಥಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಹಾಗೂ ದ್ವಿತೀಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪಡೆದುಕೊಂಡಿತು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶ್ರೀಮತಿ ಮೇರಿ ಡಿ’ಸಿಲ್ವ ವಂದಿಸಿ, ಬಾಲಕೃಷ್ಣ ಪೊರ್ದಾಳ್ ಕಾರ‍್ಯಕ್ರಮ ನಿರೂಪಿಸಿದರು.

ಸಿ. ಲಿಲ್ಲಿ ಡಿಸೋಜ ಬಿ.ಎಸ್.

ಶಾಲಾ ಮುಖ್ಯೋಪಾಧ್ಯಾಯಿನಿ

 

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105