ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆ ಮುಲ್ಕಿ ಮಂಗಳೂರು ದ.ಕ
ಸೃಷ್ಟಿಯ ಸಂರಕ್ಷಣೆ ನಮ್ಮ ಜವಾಬ್ದಾರಿ
ದೇವರು ನಮ್ಮ ಪ್ರೀತಿಯಿಂದ ಈ ಸುಂದರ ಪ್ರಥ್ವಿಯನ್ನು ನಮ್ಮ ಕೈಯಲ್ಲಿ ಕೊಟ್ಟಿದ್ದಾರೆ ಅದನ್ನು ನಾವು ಜೋಪಾನವಾಗಿ ರಕ್ಷಿಸಬೇಕು.ಒಳ್ಳೆಯ ರೀತಿಯಲ್ಲಿ ಉಪಯೋಗಿಸಬೇಕು. ಅಲ್ಲದೆ ಅದನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು.
ಈ ಸುಂದರವಾದ ಭೂಮಿ ನಮಗೆ ಆಹಾರ ಗಾಳಿ, ವಸತಿ ಹಾಗೂ ಅಗತ್ಯವಿರುವ ವಸ್ತುಗಳನ್ನು ಕೊಡುತ್ತದೆ. ಅದರ ಒಳ್ಳೆಯತನವನ್ನು ಅರಿತು ಅದನ್ನು ರಕ್ಷಿಸುವ ಬದಲು ಮಾನವರಾದ ನಾವು ಕೆಟ್ಟದನ್ನೇ ಮಾಡಿ ಅದನ್ನು ಹಿಂದಿರುಗಿಸುತ್ತಿದ್ದೇವೆ. ಇದರಿಂದಾಗಿ ಭೂಮಿಯ ತಾಪ ಹೆಚ್ಚುತ್ತಿದೆ. ಸ್ವಚ್ಚ ಗಾಳಿ ಸಿಗುವುದಿಲ್ಲ. ಆಹಾರದ ಸಮಸ್ಯೆ ತಲೆದೋರುತ್ತಿದೆ.
ಪ್ರಾಣಿಪಕ್ಷಿಗಳಿಗೆ ಮನೆಯಂತಿರುವ ಅರಣ್ಯ ನಾಶ ಮಾಡಿದರೆ ಪರಿಣಾಮ ಏನಾಗಬಹುದು? ತಂಪಾದ ಗಾಳಿ ಬೀಸುವ, ಮಣ್ಣನ್ನು ಸಂರಕ್ಷಿಸುವ, ಗಿಡಮರಗಳನ್ನು ಕಡಿದರೆ ಹೇಗೆ? ಮನುಷ್ಯರು ಹಾಗೂ ಪ್ರಾಣಿಪಕ್ಷಿಗಳು ತಮ್ಮ ಆಹಾರಕ್ಕಾಗಿ ಔಷಧಿಗಾಗಿ ಗಿಡಮರಗಳನ್ನು ಅವಲಂಭಿಸಿವೆ. ಹೀಗಿರುವಾಗ ನಾವು ಅವುಗಳನ್ನು ರಕ್ಷಿಸಬೇಕು. ಮನುಷ್ಯನ ಸ್ವಾರ್ಥದಿಂದಾಗಿ ವಾತಾವರಣವು ಕಲುಷಿತಗೊಂಡಿದೆ ಸಂಪನ್ಮೂಲಗಳು ಬೇಗ ಬರಿದಾಗುತ್ತವೆ.  ಮಾನವನ ಮೂಲ ಅಗತ್ಯತೆಗೋಸ್ಕರ ನಮ್ಮ ಪ್ರಕೃತಿಯನ್ನು ರಕ್ಷಿಸಿ ಅದರ ಸೌಂದರ್ಯವನ್ನು ಹೆಚ್ಚಿಸಲು ನಾವೆಲ್ಲರೂ ಪಣತೊಡೋಣ ಎಂದು ಮುಖ್ಯ ಶಿಕ್ಷಕರು ಮಕ್ಕಳಿಗೆ ತಿಳಿಯಪಡಿಸಿದರು.
ಆ ಬಳಿಕ ಮಕ್ಕಳನ್ನು ಪ್ರಕೃತಿ ವೀಕ್ಷಣೆಗೆ ಕರೆದುಕೊಂಡು ಹೋಗಲಾಯಿತು. ಮಕ್ಕಳು ಅಲ್ಲಿಯ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ತಾವು ಪರಿಸರವನ್ನು ಸಂರಕ್ಷಿಸುತ್ತೇವೆ. ಪೆÇೀಷಿಸಿ ಬೆಳೆಸುತ್ತೇವೆ ಎಂದು ಘೋಷಣೆಗಳನ್ನು ಕೂಗಿ ಮರಗಳನ್ನು ಅಪ್ಪಿಕೊಂಡು ಮರಗಳನ್ನು ರಕ್ಷಿಸುತ್ತೇವೆ ಎಂದು ಪ್ರತಿಜ್ಞೆಮಾಡಿದರು.

ವಿದ್ಯಾರ್ಥಿಗಳೇ ಪ್ರಕೃತಿಯ ಶಿಶುಗಳು ಮಕ್ಕಳಿಂದಲೇ ಪ್ರಕೃತಿಯ ಉಳಿವು

ಗಿಡ ಉಳಿಸಲು ಕೈ ಮುಂದೆ ಮಾಡಿ, ಭವಿಷ್ಯಕ್ಕಾಗಿ ಗಿಡಗಳನ್ನು ಉಳಿಸಿರಿ

ಹಸಿರೇ ಉಸಿರು,ಭೂಮಿಯನ್ನು ಉಳಿಸಿ ಗಿಡಗಳನ್ನು ರಕ್ಷಿಸಿ

ನಾಳೆಗಾಗಿ ಇಂದೇ ಉಳಿಸಿರಿ (start ....today save tomorrow)

Reported By
Sr Gracy Monica Bs
Headmistress

 

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105