ಮಂಗಳೂರು ನಗರ–ತಾಲೂಕು ತ್ರೋಬಾಲ್ ಪಂದ್ಯಾಟ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ವಾಮಂಜೂರು, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ, ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವು ದಿನಾಂಕ 03-09-2016ರಂದು ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು, ವಾಮಂಜೂರು, ಇದರ ಕ್ರೀಡಾಂಗಣದಲ್ಲಿ ನಡೆಯಿತು.

ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ಭಗಿನಿ ಮಾರಿಯೋಲಾ ಬಿ.ಎಸ್‍ರವರು, ಎಲ್ಲಾ ಕ್ರೀಡಾಪಟುಗಳ ಅವಿರತ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ lions clubನ ಕಾವೂರು ವಲಯದ ಮುಖ್ಯಸ್ಥರು ಹಾಗೂ ದಾಸ್ ಎಸೋಸಿಯೇಟ್ಸ್ ವಾಮಂಜೂರು ಇದರ ಮಾಲಕರಾದ ಶ್ರೀಯುತ ಮೋಹನ್‍ದಾಸ್ ಶೆಟ್ಟಿಯವರು ಸೋಲು ಮತ್ತು ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿ, ಕ್ರೀಡಾಮನೋಭಾವವನ್ನು ಬೆಳೆಸಿದಾಗ ಯುವ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ನುಡಿದರು. ಸಮಾರಂಭದಲ್ಲಿ ಶ್ರೀಯುತ ರಘುಸಾಲಿಯನ್, ದಕ್ಷಿಣಕನ್ನಡ ಜಿಲ್ಲೆಯ ಕ್ರೀಡಾ ಸಂಯೋಜಕರಾದ ಶ್ರೀಯುತ ಶಶಿಧರ್ ಮಾಣಿ, ಮಂಗಳೂರು ನಗರ ವಲಯದ ಕ್ರೀಡಾಸಂಯೋಜಕರಾದ ಶ್ರೀಯುತ ಜಗದೀಶ್‍ರವರು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಭಗಿನಿ ಸಾಧನಾ ಬಿ.ಎಸ್‍ರವರು ಸರ್ವರನ್ನು ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಜಯರಾಮ್‍ರವರು ವಂದಿಸಿದರು. ಶ್ರೀಮತಿ ಸವಿತಾರವರುಕಾರ್ಯಕ್ರಮವನ್ನು ನಿರೂಪಿಸಿದರು.

ಫಲಿತಾಂಶ: ಬಾಲಕರ ವಿಭಾಗ

ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ವಾಮಂಜೂರು    -    ಪ್ರಥಮ
ಪದುವಾ ಪದವಿ ಪೂರ್ವಕಾಲೇಜು, ನಂತೂರು                 -    ದ್ವಿತೀಯ

 

ಬಾಲಕಿಯರ ವಿಭಾಗ


ಸೈಂಟ್‍ಆಗ್ನೆಸ್ ಪದವಿ ಪೂರ್ವಕಾಲೇಜು, ಬೆಂದೂರು            -    ಪ್ರಥಮ
ಸರಕಾರಿ ಪದವಿ ಪೂರ್ವಕಾಲೇಜು, ಬಲ್ಮಠ                     -    ದ್ವಿತೀಯ

 

ಭಗಿನಿ ಸಾಧನಾ ಬಿ.ಎಸ್
ಪ್ರಾಚಾರ್ಯರು
ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು,

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105