ಪುತ್ತೂರು: ಪ್ರೀತಿ ಹಾಗೂ ವಾತ್ಸಲ್ಯವನ್ನು ಧಾರೆ ಎರೆದ ಶಿಕ್ಷಕರು ಮಕ್ಕಳಿಗೆ ಗುರುವಾಗಿದ್ದಾರೆ. ಇಂದು ನಾವು ಏನಾದರೂ ಸಾಧನೆ ಮಾಡಿದ್ದರೆ ಅದು ಶಿಕ್ಷಕರು ಕಲಿಸಿದ ಶಿಸ್ತಿನ ಬೋಧನೆಯಿಂದ. ಆದ್ದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮೈಸೂರಿನ ಜೆ.ಎಸ್.ಎಸ್ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ನ್ಯೂರಾಲೋಜಿಸ್ಟ್ ಆಗಿರುವ ಡಾ.ಶಾಸ್ತಾರ ಪಿ.ರವರು ಹೇಳಿದರು.  ಅವರು ಜೂ.11 ರಂದು ಲಿಟ್ಲ್ ಫ್ಲವರ್ ಶಾಲೆಯ ಸಭಾಂಗಣದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ, ಗುರು-ಶಿಷ್ಯವೃಂದ, ರಕ್ಷಕ-ಶಿಕ್ಷಕ ಸಂಘದ ಸಹಯೋಗದಲ್ಲಿ ನಡೆದ ಕಳೆದ 42 ವರ್ಷಗಳಿಂದ ಶಿಕ್ಷಕಿ ವೃತ್ತಿಯನ್ನು ನಿರ್ವಹಿಸಿ ನಿವೃತ್ತರಾದ ಶಾಲೆಯ ಸಹಶಿಕ್ಷಕಿ ಲೀಡಿಯಾ ಮರಿಯ ರಸ್ಕೀನ್ಹಾರವರ ವಿದಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಳೆದ 4 ದಶಕದಿಂದ ಶಿಕ್ಷಕಿ ವೃತ್ತಿಯನ್ನು ನಿರ್ವಹಿಸಿದ ಲೀಡಿಯಾ ಟೀಚರ್, ಕೇವಲ ನಾಲ್ವರು ವಿದ್ಯಾರ್ಥಿಗಳಿಂದ ಆರಂಭಿಸಿ ಪ್ರಸ್ತುತ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್ ಹಾಗೂ ಕಳೆದ ಎರಡು ದಶಕದ ಹಿಂದೆ ಇದೇ ಸಂಸ್ಥೆಯಲ್ಲಿ ಪುಟ್ಟ ಬಾಲಕನಾಗಿ ಕಿರಿಯ ಪುಷ್ಪದಂತಿದ್ದ ನಾನು, ಇಂದು ಒಂದೇ ವೇದಿಕೆಯಲ್ಲಿ ಸಮಾಗಮ ಆಗುತ್ತಿರುವುದು ಸಂತಸವಾಗುತ್ತದೆ ಎಂದ ಅವರು ತಿರುಗುವ ಕಾಲಚಕ್ರಕ್ಕೆ ಅನುಗುಣವಾಗಿ ಅಂದು ಕಿರಿಯ ಪುಷ್ಪದಂತಿದ್ದ ನಾನು ಇಂದು ಹಿರಿಯ ಪುಷ್ಪದಂತೆ ಗೋಚರಿಸುತ್ತಿದ್ದುದಾದರೆ ಅದಕ್ಕೆ ಕಾರಣ ಮಕ್ಕಳನ್ನು ಬೆಳಗಿಸಿದ ಶಿಕ್ಷಕರು. ಶಿಕ್ಷಕರಿಂದಾಗಿ ನಾನು ಇಂದು ವೇದಿಕೆಯಲ್ಲಿ ನಿಂತು ಮಾತನಾಡಲು ಧೈರ್ಯದಲ್ಲಿ ನಿಂತಿz್ದÉೀನೆ ಎಂದರು. ಈ ಶಾಲೆಯಲ್ಲಿ ಕಳೆದ ಏಳು ವರ್ಷಗಳು ನನಗೆ ಏಳು ನಿಮಿಷದಂತೆ ಉರುಳಿ ಹೋದವು. ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಶಿಸ್ತನ್ನು ಮೈಗೂಡಿಸಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸಿz್ದÉೀನೆ. ನನ್ನ ಶಿಕ್ಷಕಿ ಮರಿಯಾ ಮೇಡಂರವರು ನನ್ನನ್ನು ಬೆಳೆಸಿ ಆಶೀರ್ವದಿಸಿದ್ದರಿಂದ ನಾನು ಇಂದು ಈ ಮಟ್ಟಕ್ಕೆ ಬೆಳೆದಿz್ದÉೀನೆ ಎಂದು ಡಾ.ಶಾಸ್ತಾರರವರು ಹೇಳಿದರು.  ಸಾವಿರಾರು ವಿದ್ಯಾರ್ಥಿಗಳ ಜ್ಞಾನ ಜ್ಯೋತಿ ಬೆಳಗಿಸಿದ ಕೀರ್ತಿ-ಸಿಸ್ಟರ್ ಮಾರಿಯೋಲ: ಅಧ್ಯಕ್ಷತೆ ವಹಿಸಿದ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತೀಯ ಶಿಕ್ಷಣ ಮಂಡಳಿಯ ಸಂಯೋಜಕಿ ಸಿಸ್ಟರ್ ಮಾರಿಯೋಲ ಬಿ.ಎಸ್.ರವರು ಮಾತನಾಡಿ, ಕಳೆದ 42 ವರ್ಷಗಳಲ್ಲಿನ ಶಿಕ್ಷಕಿ ಬಾಳ್ವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ಜ್ಯೋತಿಯನ್ನು ಬೆಳಗಿಸಿದ ಕೀರ್ತಿ ಲೀಡಿಯಾ ಮರಿಯಾರವರಿಗೆ ಸಲ್ಲುತ್ತದೆ. ಮಾತ್ರವಲ್ಲದೆ ವಿದ್ಯಾರ್ಥಿಗಳು ಕೂಡ ಇದಕ್ಕೆ ಉತ್ತಮವಾಗಿ ಸ್ಪಂದಿಸಿ ಇಂದು ಸಮಾಜದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಪ್ರಭುಕ್ರಿಸ್ತರ ಬೆಳಕಿನಲ್ಲಿ ನಡೆದ ಶಿಕ್ಷಕಿ ಲೀಡಿಯಾರವರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಲೀಡಿಯಾರವರ ಪರೋಪಕಾರ ಕೆಲಸ, ಕಲಿಕೆಗೆ ಪೆÇ್ರೀತ್ಸಾಹ, ಪ್ರೀತಿ, ಪ್ರಾರ್ಥಿಸುವ ಗುಣ, ವಿಧೇಯತೆ, ಭಕ್ತಿ ಗೌರವ, ಪೆÇೀಷಕರಲ್ಲಿನ ಉತ್ತಮ ಸಂಬಂಧ ಮುಂತಾದ ಉತ್ತಮ ಗುಣಗಳೇ ಅವರ ವೃತ್ತಿಯ ಕಿರೀಟ ರತ್ನಗಳಾಗಿವೆ ಎಂದ ಅವರು ಎಲೆಮರೆಯ ಕಾಯಿಯಂತೆ ಹಾಗೂ ಮಾತು ಕಡಿಮೆ, ದುಡಿಮೆ ಹೆಚ್ಚು ಎಂಬಂತೆ ಶಿಕ್ಷಕಿ ಲೀಡಿಯಾರವರು ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಲ್ಲಿರುವ ನಿಷ್ಠೆಗೆ ಬೆಥನಿ ಸಂಸ್ಥೆ ಎಂದಿಗೂ ಚಿರಋಣಿಯಾಗಿದೆ ಎಂದು ಹೇಳಿ ಮುಂದಿನ ನಿವೃತ್ತ ಬದುಕು ಸುಖಕರವಾಗಿರಲಿ ಎಂದು ಶುಭಹಾರೈಸಿದರು.ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸುವವರು ಶಿಕ್ಷಕರು-ಗೋಕುಲ್‍ನಾಥ್: ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್ ಪಿ.ವಿರವರು ಮಾತನಾಡಿ, ವಿದ್ಯಾರ್ಥಿಗಳ ಮನಸ್ಸನ್ನು ಕೆರಳಿಸದೆ, ಅರಳಿಸುವ ಕೆಲಸವನ್ನು ಮಾಡುವವರು ಶಿಕ್ಷಕರು. ಇಂದು ನಿವೃತ್ತರಾಗುವ ಶಿಕ್ಷಕಿ ಲೀಡಿಯಾರವರ ಮನಸ್ಸು ಹೇಗೆ ಎಂಬುದು ಅವರ ನಿವೃತ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದ ಹಿರಿಯ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ನೋಡಿದಾಗ ಗೊತ್ತಾಗುತ್ತದೆ ಮಾತ್ರವಲ್ಲದೆ ಹೃದಯ ತುಂಬಿ ಬರುತ್ತದೆ. ಅದೇ ರೀತಿ ಇಂದಿನ ಮುಖ್ಯ ಅತಿಥಿ ಹಾಗೂ ಇದೇ ಶಾಲೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಡಾ.ಶಾಸ್ತಾರ ಹಾಗೂ ಅವರ ತಂದೆಯವರ ಅನ್ಯೋನ್ಯ ಪ್ರೀತಿಯನ್ನು ನೋಡಿದಾಗಲೂ ಹೃದಯ ತುಂಬಿ ಬರುತ್ತದೆ ಎಂದರು. ನಿವೃತ್ತರಾದ ಶಿಕ್ಷಕಿ ಲೀಡಿಯಾರವರ ಮುಂದಿನ ನಿವೃತ್ತ ಬದುಕು ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭಹಾರೈಸುತ್ತೇವೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಬದುಕು ಹಸನಾಗಿಸಿದವರು-ಶಾಲಿನಿ: ಶಿಕ್ಷಣ ಇಲಾಖೆಯ ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಶಾಲಿನಿ ಬಿ.ಶೆಟ್ಟಿರವರು ಮಾತನಾಡಿ, ಮನುಷ್ಯನ ಸಾರ್ಥಕತೆ ಅರಿಯಬೇಕಾದರೆ ಆತ ಸಮಾಜದಲ್ಲಿ ಹೇಗೆ ಬಾಳುತ್ತಾನೆ ಎಂಬುದಾಗಿದೆ. ಶಿಸ್ತು ಎಂಬುದು ಪ್ರತೀ ವಿದ್ಯಾರ್ಥಿಯಲ್ಲಿದ್ದರೆ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಸಾಧ್ಯವಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಬದುಕು ಹಸನಾಗಿಸಿದ ಶಿಕ್ಷಕಿ ಲೀಡಿಯಾರವರ ನಿವೃತ್ತಿ ಬದುಕು ಕೂಡ ಹಸನಾಗಲಿ ಎಂದು ಶುಭಹಾರೈಸಿದರು.ವಿದ್ಯಾರ್ಥಿಗಳ ಹೃದಯದಲ್ಲಿ ನೆಲೆಸಿದ್ದಾರೆ-ಸಂಶುದ್ಧೀನ್: ಲಿಟ್ಲ್ ಫ್ಲವರ್ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ , ಪತ್ರಕರ್ತ ಸಂಶುದ್ಧೀನ್ ಸಂಪ್ಯರವರು ಮಾತನಾಡಿ, ಶಿಕ್ಷಕಿ ಲೀಡಿಯಾರವರು ಇಂದು ಪ್ರತಿಯೋರ್ವ ವಿದ್ಯಾರ್ಥಿಯ ಹೃದಯದಲ್ಲಿ ನೆಲೆಸಿದ್ದಾರೆ ಎಂಬುದು ನಿಜ. ಯಾಕೆಂದರೆ ಲೀಡಿಯಾರವರು ವಿದ್ಯೆಯನ್ನು ಬೋಧಿಸಿದ ಪರಿಯೇ ಅಂತಹುದು. ವಿದ್ಯಾರ್ಥಿಗಳು ಹದಿಹರೆಯಕ್ಕೆ ಕಾಲಿಡುವ ಸಂದರ್ಭ ಸಾಕಷ್ಟು ಚಿಂತನೆಗಳನ್ನು ಮಾಡಬೇಕಿದೆ. ಇಂದಿನಿಂದ ಶಿಕ್ಷಕಿ ಲೀಡಿಯಾರವರು ನಿವೃತ್ತಿ ಬದುಕನ್ನು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದಲ್ಲಿ ಕಳೆಯುವಂತಾದರೂ, ಶಿಕ್ಷಕಿ ಲೀಡಿಯಾರವರು ಮಾತ್ರ ಅವರು ಬೋಧಿಸಿದ ವಿದ್ಯಾರ್ಥಿಗಳ ಹೃದಯದಲ್ಲಿ ನೆಲೆಸಿರುವುದು ಸತ್ಯ. ಉದಾಹರಣೆಗೆ ಅವರೇ ಕಲಿಸಿದ ಶಿಷ್ಯ ಶಾಸ್ತಾರವರು ಇಂದು ಓರ್ವ ವೈದ್ಯರಾಗಿ ಇಂದು ಪ್ರಜ್ವಲಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿ ಶಿಕ್ಷಕಿ ಲೀಡಿಯಾರವರ ನಿವೃತ್ತಿ ಬದುಕಿಗೆ ಶುಭಹಾರೈಸಿದರು. ಸುದೀರ್ಘ 42 ವರ್ಷಗಳ ಕಾಲ ಶಿಕ್ಷಕಿ ವೃತ್ತಿಯನ್ನು ನಿರ್ವಹಿಸಿ ನಿವೃತ್ತರಾದ ಶಾಲೆಯ ಸಹ-ಶಿಕ್ಷಕಿ ಲೀಡಿಯಾ ಮರಿಯ ರಸ್ಕೀನ್ಹಾರವರನ್ನು ಲಿಟ್ಲ್ ಫ್ಲವರ್ ಶಾಲಾ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಲೀಡಿಯಾ ಮರಿಯಾರವರು ಮಾತನಾಡಿ, ದುಃಖ ಹಾಗೂ ಸಂತೋಷದ ಸಮ್ಮಿಶ್ರ ಭಾಗವಾಗಿದೆ ಇಂದಿನ ಕ್ಷಣಗಳು. ಕಳೆದ 42 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ನೀಡಿದ ಸಂದರ್ಭದಲ್ಲಿ ತನ್ನೊಂದಿಗೆ ಸಹಕರಿಸಿ, ಆಧರಿಸಿದ ಪ್ರತಿಯೋರ್ವರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಜೀವನಕ್ಕೆ ಅನ್ನವನ್ನಿತ್ತ ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್, ಬೆಥನಿ ಸಂಸ್ಥೆ ಹಾಗೂ ಸರಕಾರಕ್ಕೆ ಚಿರಋಣಿಯಾಗಿz್ದÉೀನೆÂ. ನಿವೃತ್ತ ಶಿಕ್ಷಕರ ಮಾರ್ಗದರ್ಶನ, ಪ್ರಸಕ್ತ ಶಿಕ್ಷಕರ ಪ್ರೀತಿ, ಪತಿ-ಮಕ್ಕಳ, ಕುಟುಂಭಿಕರ ಸಹಕಾರ, ಪೆÇ್ರೀತ್ಸಾಹಕ್ಕೂ ಅಭಾರಿಯಾಗಿz್ದÉೀನೆ.
    -ಲೀಡಿಯಾ ಮರಿಯಾ ರಸ್ಕೀನ್ಹಾ, ನಿವೃತ್ತ ಶಿಕ್ಷಕಿ,

 

       ಶಾಲೆಯ ಆವರಣದೊಳಗೆ ಸುಮಾರು ಒಂದು ಲಕ್ಷ ಎಂಟು ಸಾವಿರ ವೆಚ್ಚದಲ್ಲಿ ಇಂಟರ್‍ಲಾಕ್‍ನ್ನು ಅಳವಡಿಸಿದ ಶಾಲೆಯ ಅಭಿಮಾನಿ ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್ ಪಿ.ವಿ ಹಾಗೂ ಅವರ ಪತ್ನಿ ಪ್ರಾಂಶುಪಾಲೆಯಾಗಿರುವ ಹೇಮಲತಾ ಗೋಕುಲ್‍ನಾಥ್‍ರವರನ್ನು ಹಾಗೂ ಮುಖ್ಯ ಅತಿಥಿ, ಪ್ರಸ್ತುತ ಮೈಸೂರು ಜೆ.ಎಸ್.ಎಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ನ್ಯೂರಾಲೋಜಿಸ್ಟ್ ಆಗಿರುವ ಡಾ.ಶಾಸ್ತಾರ ಪಿ. ಹಾಗೂ ಅವರ ತಂದೆ ಉಪನ್ಯಾಸಕ ರಾಮಚಂದ್ರ ಭಟ್‍ರವರನ್ನು ಸನ್ಮಾನಿಸಲಾಯಿತು.  ನಿವೃತ್ತ ಶಿಕ್ಷಕಿ ಲೀಡಿಯಾ ಮರಿಯರವರ ಪತಿ,  ಮೆಸ್ಕಾಂ ನಿವೃತ್ತ ಉದ್ಯೋಗಿ ಫ್ರ್ಯಾಂಕಿ ಲೋಬೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಲೀಡಿಯಾರವರ ಕುಟುಂಬಿಕರು ಶಿಕ್ಷಕಿ ಲೀಡಿಯಾರವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರಶಾಂತಿ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ಲೀಡಿಯಾರವರ ಅಭಿನಂದನಾ ಪತ್ರ ವಾಚಿಸಿದರು. ಶಾಲಾ ಸಂಚಾಲಕಿ ಸಿಸ್ಟರ್ ಸರಿಟಾ ಬಿ.ಎಸ್‍ರವರು ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿಗಳ ಪರವಾಗಿ ಸಹನಾ, ಶಿಕ್ಷಕರ ಪರವಾಗಿ ಡೋರತಿ ಮಿನೆಜಸ್‍ರವರು ನಿವೃತ್ತ ಶಿಕ್ಷಕಿ ಲೀಡಿಯಾರವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಕ್ಲೇರಾ ಪಾೈಸ್‍ರವರು ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್ ದಂಪತಿಗಳ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ನಿವೃತ್ತ ಶಿಕ್ಷಕಿಗೆ ಶುಭಾಶಯ ಗೀತೆ ಹಾಡಿದರು. ಶಿಕ್ಷಕಿ ಸಿಸ್ಟರ್ ನವನೀತ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೆÇರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105