ಶಿಕ್ಷಕರ ದಿನಾಚರಣೆ 2024 -25
2024 -25ನೇ ಸಾಲಿನ ಶಿಕ್ಷಕರ ದಿನಾಚರಣೆಯನ್ನು ನಮ್ಮ ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿಸಂಸ್ಥೆಯಲ್ಲಿ ತಾರೀಕು 5.9.2024ರಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಈ ಕಾರ್ಯಕ್ರಮವನ್ನು ಪ್ರಾರ್ಥನ ಗೀತೆಯೊಂದಿಗೆ ಪ್ರಾರಂಭಿಸಲಾಯಿತು . ಶಿಕ್ಷಕಿ ವಿದ್ಯಾರ್ಥಿನಿಯರು ಭಾಷಣದ ಮೂಲಕ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಕ್ಷಕಿ ವಿದ್ಯಾರ್ಥಿನಿಯರು ಪ್ರ ದರ್ಶಿಸಿದರು ಶಿಕ್ಷಕರಿಗೆ ಕೆಲವು ಮನೋರಂಜನ ಆಟಗಳನ್ನು ವಿದ್ಯಾರ್ಥಿಗಳು ನಡೆಸಿದರು ಸಂಸ್ಥೆಯ ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಕರು ಶಿಕ್ಷಣದ ಮೂಲಕ ಹೇಗೆ ಒಂದು ಸಮಾಜವನ್ನು ರೂಪಿಸುತ್ತಾರೆ ಮತ್ತು ಶಿಕ್ಷಕರ ಗುಣಲಕ್ಷಣಗಳನ್ನು ತಿಳಿಸಿ ಹೇಳಿದರು.ನಂತರ ಎಲ್ಲಾ ಶಿಕ್ಷಕರಿಗೆ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ಹಾಗೂ ಆಟದಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಕಾಲೇಜಿನ ನಾಯಕಿಯನ್ನು ಪ್ರಶಂಸಿಸಲಾಯಿತು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
ಶಿಕ್ಷಕ ರಕ್ಷಕ ಸಭೆ 2024-25
ಶಿಕ್ಷಕರ ಪೋಷಕರ ಸಭೆ ದಿನಾಂಕ 04.09.2024 ರಂದು 10.30ಕ್ಕೆ ಸರಿಯಾಗಿ ನಮ್ಮ ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು ಈ ಸಭೆಯ ಅಧ್ಯಕ್ಷ ಸ್ಥಾನವನ್ನು ನಮ್ಮ ಸಂಸ್ಥೆಯ ಸಂಚಾಲಕರಾದ ವಂ.ಭ .ರೋಸ್ ಲಿಟರವರು ವಹಿಸಿದ್ದು ಪ್ರಾರ್ಥನ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು , ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ರೋನಾಲ್ಡ್ ಕಾರ್ಲೊರವರು ಸ್ವಾಗತಿಸಿದರು , ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ವಂ. ಧರ್ಮಗುರು. ರೂಪೇಶ್ ಮಾಡ್ತಾರವರು ವಿದ್ಯಾರ್ಥಿ ಶಿಕ್ಷಕಿಯರ (ಜೀವನದಲ್ಲಿ ಪೋಷಕರ) ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಇದರ ಕುರಿತು ಸೂಕ್ತ ಉದಾಹರಣೆಗಳ ಮೂಲಕ ಶಿಕ್ಷಣವು ಜ್ಞಾನದೊಂದಿಗೆ ಜೀವನವನ್ನುಉತ್ತಮವಾಗಿ ಸಾಗಿಸಲು ಜೀವನ ಕೌಶಲಗಳನ್ನು ಬೆಳೆಸುವುದರ ಜೊತೆ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಶಿಕ್ಷೆಯ ಜೊತೆ ಜೊತೆ ಶಿಕ್ಷಣ ಜವಬ್ದಾರಿ ಇತ್ಯಾದಿಗಳನ್ನು ಜಾಗರುಕತೆಯಿಂದ ತಿಳಿಸಿಕೊಡುವುದು ಅಲ್ಲದೆ ಒಳ್ಳೆಯ ಆದರ್ಶ ವ್ಯಕ್ತಿಯಾಗಿ ಅವರನ್ನು ರೂಪಿಸುವುದು ಹೆತ್ತವರ/ಪೋಷಕರ ಜವಬ್ದಾರಿಯಾಗಿದೆ ಎಂಬುದನ್ನು ಸವಿವರವಾಗಿ ತಿಳಿಸಿದರು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲವೀನ ಲೋಬೊರವರು ಸಂಸ್ಥೆಯ ನೀತಿನಿಯಮ ಹಾಗೂ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳ ಕುರಿತು ಪೋಷಕರಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿದ ವಂ. ಭ. ರೋಸ್ ಲಿಟರವರು ಸಂಸ್ಥೆಯು ಉತ್ತಮ ಪಥದಲ್ಲಿ ಸಾಗಲು ಪೋಷಕರ/ ಹೆತ್ತವರ ಸಹಕಾರ ಸ್ಮರಿಸುತ್ತ ಎಲ್ಲಾರಿಗೂ ಶುಭಹಾರೈಸಿದರು, ವಿದ್ಯಾರ್ಥಿ ಶಿಕ್ಷಕಿಯರು ತಮ್ಮ ಅನುಭವವನ್ನು ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಣೆಯನ್ನು ಉಪನ್ಯಾಸಕರಾದ ಶ್ರೀಮತಿ ವೀಣಾಬೆನ್ನಿಸ್ ರವರು ನೆರವೇರಿಸಿದರು, ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀಮತಿ ಜಾಸ್ಮಿನ್ ಮೊರಾಸ್ ರವರು ಮಾಡಿದರು. ರಾಷ್ಟ್ರಗೀತೆಯೊಂದಿಗೆ ಬೋಜನ ಸೇವನೆಯ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.