11.07.2015 ರಂದು ಶನಿವಾರ ಲಿಟ್ಲ್ ಪ್ಲವರ್ ಶಾಲೆಯಲ್ಲಿ 2015-16ನೇ ಸಾಲಿನ ಶೈಕ್ಷಣಿಕ ವರ್ಷದ ವನಮಹೋತ್ಸವವನ್ನು ಗೈಡ್ಸ್ , ಬುಲ್ -ಬುಲ್ ಹಾಗೂ ಕ್ಲಬ್ ದಳದ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಲಾ ಮ್ಯಾನೇಜರ್ ಸಿ.ಲೋಯ್ಲಿನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಯುತ ಸಂಶುದ್ದೀನ್ ಸಂಪ್ಯ , ಹಾಗೂ ನಾರಾಯಣ ಅಮ್ಮಂಜೆಯವರು ಉಪಸ್ಥಿತರಿದ್ದರು. ಸಂಶುದ್ದೀನ್ ರವರು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ನುಡಿಗಳನ್ನು ಗೈದರು. ಗೈಡ್ ಅನುಪಮ ಸ್ವಾಗತಿಸಿದರು. ಗೈಡ್ ಜನನಿ ಧನ್ಯವಾದ ಗೈದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆದ ಬಳಿಕ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹಾಡುಗಳನ್ನು ಹಾಗೂ ಘೋಷಣೆಗಳನ್ನು ಹೇಳುತ್ತಾ ದರ್ಬೆ ಸರ್ಕಲ್ನಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು.

Comments powered by CComment

Copyright © 2013 - www.bethanymangaloreprovince.org. Powered by eCreators

Home | About Us | News | Sitemap | Contact