ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ
ವಿದ್ಯಾರ್ಥಿಗಳಲ್ಲಿ ದೈಹಿಕ ಧೃಢತೆಗೆ ಕ್ರೀಡೆ ಸಹಕಾರಿ : ಶ್ರೀಮತಿ ಅನಿತಾ ನಿಕಮ್

ಶಾಲಾ ಶೈಕ್ಷಣಿಕ ಚಟುವಟಿಕೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ವಿಷಯವಾದ ಕ್ರೀಡೆಗೆ ಸಮಾನ ಮಹತ್ವ ನೀಡಿದ್ದಲ್ಲಿ ಬೆಳೆಯುವ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಆ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಫಲಿತಾಂಶ ಉನ್ನತೀಕರಣ ಮಾಡಲು ಸಾಧ್ಯ ಎಂದು ಬಜಪೆ ಪೋಲಿಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ಅನಿತಾ ನಿಕಮ್‍ರವರು ಬಜಪೆ ಹೋಲಿ ಫ್ಯಾಮಿಲಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸುತ್ತಾ ನುಡಿದರು. ವೇದಿಕೆಯಲ್ಲಿ ಅರಕ್ಷಕ ಠಾಣೆಯ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದು ಶುಭ ನುಡಿದರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶಾಲಾ ಸಂಚಾಲಕಿ ವ|ಭ| ಮಾರಿಲೀಟಾ ಬಿ.ಎಸ್ ರವರು ಬಜಪೆ ಹೋಲಿ ಫ್ಯಾಮಿಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪಠ್ಯದ ವಿಷಯದ ಜೊತೆಗೆ ಪಠ್ಯೇತರ ವಿಷಯವಾದ ಕ್ರೀಡೆಗೆ ಹೆಚ್ಚು ಮಹತ್ವ ನೀಡಿ ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆವುಳ್ಳವರು. ಕ್ರೀಡೋತ್ಸವದ ಮೂಲಕ ಮಕ್ಕಳಲ್ಲಿ ಏಕತೆ ಮತ್ತು ಸಮಗ್ರತೆಯನ್ನು ಬೆಳೆಸಲು ಸಾಧ್ಯ ಎಂದು ಶುಭ ನುಡಿದರು. ಈ ಸಂದರ್ಭ ರಾಜ್ಯ ಮಟ್ಟದಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸುಮಾರು 20ಕ್ಕೂ ಮಿಕ್ಕ ವಿವಿಧ ಕ್ರೀಡಾ ಸ್ಪರ್ಧೆಯನ್ನು ನಡೆಸಲಾಯಿತು. ಪ್ರತಿಯೋರ್ವ ವಿದ್ಯಾರ್ಥಿಯು ಕನಿಷ್ಠ 4 ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ವ|ಭ| ಸಿಂತಿಯಾ ಡಿ ಕುನ್ಹಾ ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪ್ರಿಯಾ ಮೊಂತೆರೊ ಹಾಗೂ ಶ್ರೀ ಅನಿಲ್ ಕ್ರಾಸ್ತ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯಿನಿ ವ|ಭ| ಶಾಲಿನಿ ಪ್ಲೋನಾ ಲೋಬೊ ಉಪಸ್ಥಿತರಿದ್ದರು. ಶಾರೀರಿಕ ಶಿಕ್ಷಕರಾದ ಶ್ರೀ ಪ್ರಶಾಂತ್ ರವರು ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಲಿಲ್ಲಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
Comments powered by CComment